Posts

Showing posts from January, 2020

Annular Solar Eclipse in Kodagu December 2019

Image
"ಕಂಕಣ ಸೂರ್ಯಗ್ರಹಣ" ವಿ. ಸೂ: ಗ್ರಹಣಗಳ ಬಗ್ಗೆ ವಿಶ್ವವಿಖ್ಯಾತರಾಗಿರುವ ಫ಼್ರೆಡ್ ಎಸ್ಪನ್ಯಾಕ್ ಎಂಬುವವರ ಕರಾರುವಕ್ಕಾದ ಲೆಕ್ಕಾಚಾರವನ್ನು ಈ ಲೇಖನದಲ್ಲಿ ಬಳಸಲಾಗಿದೆ. ಇದೇ ಡಿಸೆಂಬರ್ ೨೬ನೇ ತಾರೀಕು, ಗುರುವಾರ ಬೆಳಿಗ್ಗೆ ಕೊಡಗಿನಲ್ಲಿ ಅತ್ಯಂತ ಅಪರೂಪವಾದ ಸಂಪೂರ್ಣ (ಖಗ್ರಾಸ) ಸೂರ್ಯಗ್ರಹಣ ಘಟಿಸಲಿದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ ಮತ್ತು ಆಗ ಚಂದ್ರನು ಸೂರ್ಯನ ಮುಂದೆ ಹಾದು ಹೋಗುತ್ತಾನೆಂದು ನಿಮಗೆಲ್ಲ ಗೊತ್ತೇ ಇದೆ. ಈ ಬಾರಿಯ ವಿಶೇಷ ಗ್ರಹಣವನ್ನು "ಕಂಕಣ ಸೂರ್ಯಗ್ರಹಣ" ಎನ್ನುತ್ತಾರೆ.  "ಕಂಕಣ ಸೂರ್ಯಗ್ರಹಣ" ಎಂದರೇನು? ಆಕಾಶದಲ್ಲಿ ನಾವು ನೋಡುವಾಗ, ಸೂರ್ಯ ಮತ್ತು ಚಂದ್ರ, ಇಬ್ಬರ ಗಾತ್ರವೂ ’ತಟ್ಟೆ’ಯ ರೀತಿ, ಒಂದೇ ಸಮನಾಗಿ ತೋರುತ್ತದಲ್ಲವೆ? ಖಗ್ರಾಸ ಸೂರ್ಯಗ್ರಹಣವಾದಾಗ, ಚಂದ್ರ ಸೂರ್ಯನ ಮುಂಭಾಗದಲ್ಲಿ ಹಾದುಹೋಗುತ್ತದೆ. ಇಲ್ಲಿ ನಾವೆಲ್ಲ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ:  ೧. ಮೊದಲಿಗೆ ಸೂರ್ಯ-ಚಂದ್ರರ ಪರಸ್ಪರ ಗಾತ್ರ: ಸೂರ್ಯನ ವ್ಯಾಸ ಅಂದಾಜು ೧೪ ಲಕ್ಷ ಕಿಮೀ ಮತ್ತು ಚಂದ್ರನ ವ್ಯಾಸ ಬರೇ ಮೂರೂವರೆ ಸಾವಿರ ಕಿಮೀ. ಇನ್ನು ಭೂಮಿಯಿಂದ ಸೂರ್ಯ-ಚಂದ್ರರ ಪರಸ್ಪರ ದೂರ: ಸೂರ್ಯ ನಮ್ಮಿಂದ ಸುಮಾರು ೧೫ ಕೋಟಿ ಕಿಮೀ ದೂರದಲ್ಲಿದ್ದರೆ, ಚಂದ್ರನ ದೂರ ಬರೇ ೩ ಲಕ್ಷದ ೭೫ ಸಾವಿರ ಕಿಮೀಗಳು. ಸೂರ್ಯ-ಚಂದ್ರರ ಗಾತ್ರ ಮತ್ತು ಅವರು ನಮ್ಮಿಂದ ...